Code Yarns ‍👨‍💻
Tech BlogPersonal Blog

Pallavi Anu Pallavi (ಪಲ್ಲವಿ ಅನುಪಲ್ಲವಿ)

📅 2006-Jul-17 ⬩ ✍️ Ashwin Nanjappa ⬩ 🏷️ kannada, movie ⬩ 📚 Archive

 

ನನಗೆ ಕೊನೆಗೂ ಮಣಿ ರತ್ನಮ್ ಅವರ ಮೊದಲ ಚಲನಚಿತ್ರ Pallavi Anu Pallavi (ಪಲ್ಲವಿ ಅನುಪಲ್ಲವಿ) ನೋಡುವ ಅವಕಾಶ ಸಿಕ್ಕಿತು! ಚಿತ್ರದಲ್ಲಿ ಅನಿಲ್ ಕಪೂರ್, ಕಿರಣ್ ಮತ್ತು ಲಕ್ಶ್ಮಿ ನಟಿಸಿದ್ದಾರೆ. ಅನು (ಲಕ್ಶ್ಮಿ) ಅವಳ ಗಂಡನಿಂದ ದೂರವಾಗಿ ತನ್ನ ಸಣ್ಣ ಮಗನೊಂದಿಗೆ ಮರ್ಕೆರ (ಮಡಿಕೇರಿ) ಅಲ್ಲಿ ವಾಸವಾಗಿದ್ದಾಳೆ. ಬೆಂಗಳೂರಲ್ಲಿ ವಿಜಯ್ (ಅನಿಲ್) ಮಧು (ಕಿರಣ್) ಅನ್ನು ಒಂದು ಪಾರ್ಟಿಯಲ್ಲಿ ಬೇಟಿಯಾಗುತ್ತಾನೆ. ಬೇಟಿ ಪ್ರೀತಿಯಾಗಿ ಅರಳುತ್ತದೆ. ಮಧು ತನ್ನ ಕ್ಯಾಲಿಫೋರ್ನಿಯಾದಲ್ಲಿ ಓದುವ ಹಂಬಲವನ್ನು ಕೈಬಿಡುತ್ತಾಳೆ. ವಿಜಯ್ ತನ್ನ ತಂದೆಯ ಎಸ್ಟೇಟ್ ವ್ಯವಹಾರವನ್ನು ನೋಡಿಕೊಳ್ಳಲು ಮಡಿಕೇರಿಗೆ ಹೋಗುತ್ತಾನೆ. ಅಲ್ಲಿ ಅನುವನ್ನು ಬೇಟಿಮಾಡುತ್ತಾನೆ. ಅವಳ ದುಃಖ ನೋಡಿ ಅವಳೊಂದಿಗೆ ಸ್ನೇಹ ಬೆಳಸುತ್ತಾನೆ. ವಿಜಯ್, ಮಧು, ಅನು, ಈ ಪ್ರೇಮ ತ್ರಿಕೋಣದಲ್ಲಿ ಮುಂದೆ ಏನು ಕಾದಿದೆ?

 

ಚಿತ್ರ ಸುಂದರವಾಗಿದೆ. ಕಥೆಯಲ್ಲಿನ ಪ್ರೀತಿ ಸೊಫಿಸ್ಟಿಖೇಟೆಡ್ ಆಗಿದೆ. ಕತೆ ದುರಂತದಲ್ಲಿ ಅಂತ್ಯವಾಗುತ್ತದೆ. ಚಿತ್ರದಲ್ಲಿ ಲಕ್ಶ್ಮಿ ಹಾಗು ಕಿರಣ್ ನಳನಳಿಸಿದ್ದಾರೆ! (ಈ ಚಿತ್ರದ ನಂತರ ಕಿರಣ್ ಎಲ್ಲಿ ಮರೆಯಾದರೋ?) ಚಿತ್ರದಲ್ಲಿ ಎಲ್ಲೆಡೆ ಬೆಳಕು-ಕತ್ತಲೆಯ ಅನ್ಯೋನ್ಯಕ್ರಿಯೆ ಇದೆ. ಇಳೆಯರಾಜ ಅವರ ಹಾಡುಗಳು ಮತ್ತು ಹಿನ್ನಲೆ ಸಂಗೀತ ಅತಿ ಮಧುರವಾಗಿವೆ. ಇದು ಎಲ್ಲರ ಚಲನಚಿತ್ರ ಸಂಗ್ರಹಕ್ಕೆ ಸೇರಿಸಲು ಅರ್ಹವಾಗಿದೆ.


© 2023 Ashwin Nanjappa • All writing under CC BY-SA license • 🐘 Mastodon📧 Email